ದಾವಣಗೆರೆ
ಅಣಬೂರು ಪ್ರೌಢಶಾಲೆ ಶಿಕ್ಷಕರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ.
ದಾವಣಗೆರೆ: ಜಗಳೂರು ತಾಲೂಕಿನ ಅಣಬೂರು ಗ್ರಾಮದ ಮಾರುತಿ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿಗಳು ಶಿಕ್ಷಕರ ನೇಮಕಾತಿಗಾಗಿ ಆಗ್ರಹಿಸಿ ಪಟ್ಟಣದ ದಾವಣಗೆರೆ ರಸ್ತೆಯಲ್ಲಿನ ಆಡಳಿತ ಮಂಡಳಿ ಕಾರ್ಯದರ್ಶಿ ಮನೊಹರ ರೆಡ್ಡಿ ನಿವಾಸದ ಮುಂಬಾಗ ಅಡುಗೆ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಕಳೆದ ಕೆಲ ವರ್ಷದಿಂದಲೂ ಖಾಯಂ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರಿಂದ ಪಾಠ ಪ್ರವಚನ ನಡೆಯುತ್ತಿವೆ.ಆಡಳಿತ ಮಂಡಳಿ ಅಧ್ಯಕ್ಷರು,ಕಾರ್ಯದರ್ಶಿಗಳು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೂಡಲೇ ಶಿಕ್ಷಕರನ್ನು ನೇಮಕಾತಿ ಪ್ರಕ್ರಿಯೆ ಕೈಗೊಂಡಿಲ್ಲ ಎಂದು ಪೋಷಕ ವೆಂಕಟೇಶ್ ಆಗ್ರಹಿಸಿದರು.
ವಿದ್ಯಾರ್ಥಿನಿ ಸಿಂಚನ ಮಾತನಾಡಿ,ನಮಗೆ ಇಂಗ್ಲೀಷ್,ಕ್ರಾಪ್ಟ್ ಶಿಕ್ಷಣ,ದೈಹಿಕ ಶಿಕ್ಷಣ,ಹಿಂದಿ ಶಿಕ್ಷಕರು ಮಾತ್ರ ಸೇವೆಗೈಯುತ್ತಿದ್ದು,ವಿಜ್ಞಾನ ಶಿಕ್ಷಕರೇ ಗಣಿತ ವಿಷಯ ಬೋಧನೆ ಮಾಡಲಾಗುತ್ತಿದೆ.ನಮಗೆ ಖಾಯಂ ಶಿಕ್ಷಕರು ಬೇಕು.ಕನ್ನಡ ವಿಷಯವನ್ನು ಬೋಧನೆ ಯಾರೋಬ್ಬರೂ ಮಾಡಿಲ್ಲ.ಶೈಕ್ಷಣಿಕ ಬೋಧನಾ ಚಟುವಟಿಕೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಶಾಸಕರು ಭೇಟಿ ಆಶ್ವಾಸನೆ:ಶಾಸಕ ಬಿ.ದೇವೇಂದ್ರಪ್ಪ ಬೇಟಿನೀಡಿ ವಿದ್ಯಾರ್ಥಿಗಳ ಜೊತೆ ನಾನು ಹೋರಾಟಕ್ಕೆ ಬದ್ದನಾಗಿರುವೆ.ಆಡಳಿತ ಮಂಡಳಿ ಕಾರ್ಯದರ್ಶಿ ಮನೋಹರ್ ರೆಡ್ಡಿ ಅವರು ಆಗಮಿಸಿದರೆ ನಾನು ಸಮಸ್ಯೆ ಇತ್ಯರ್ಥಪಡಿಸುವೆ.ಆದರೆ ಅವರ ನಿರ್ಲಕ್ಷ್ಯ ನನಗೆ ಬೇಸರ ತಂದಿದೆ.ಶಾಕಾ ಶೈಕ್ಷಣಿಕ ವಿಚಾರವಾಗಿ ಮಕ್ಕಳ ಪ್ರತಿಭಟನೆ ನನಗೆ ಮುಖಭಂಗವಾಗಿದೆ ಎರಡು ದಿನಗಳೊಳಗಾಗಿ ಸಮಸ್ಯೆ ಬಗೆಹರಿಸುವೆ ಎಂದು ಆಶ್ವಾಸನೆ ನೀಡಿದರು.
ಆಡಳಿತ ಮಂಡಳಿ ಸದಸ್ಯ ವೇಣುಗೋಪಾಲರೆಡ್ಡಿ ಅವರ ಉಡಾಫೆ ಪ್ರತಿಕ್ರಿಯೆಗೆ ಪೋಷಕರು,ವಿದ್ಯಾರ್ಥಿಗಳು ಅಕ್ರೋಶ ವ್ರಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಕೆ ಪಿ ಪಾಲಯ್ಯ,ಸಮಾಜಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮಹೇಶ್ವರಪ್ಪ, ಬಿಇಓ ಹಾಲಮೂರ್ತಿ,ಎಸ್ ಬಿಸಿ ಗೌರವಾಧ್ಯಕ್ಷ ಶರಣಪ್ಪ, ಖಜಾಂಚಿ ಗುಡ್ಡಪ್ಪ, ಚಂದ್ರಪ್ಪ,ರಂಗಸ್ವಾಮಿ, ಪೋಷಕರಾದ ಲಕ್ಷ್ಮಿ,ಬಂಗಾರಪ್ಪ, ನಿಂಗಪ್ಪ, ಬಾಲರಾಜ್, ನಾಗರಾಜ್, ಮುಖಂಡರಾದ ಮಹಾಲಿಂಗಪ್ಪ ಎಚ್ ಎಂ ಹೊಳೆ, ಇಂದಿರಾ, ಪೂಜಾರ ಸಿದ್ದಪ್ಪ, ರಾಜಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು
-
ಬೆಂಗಳೂರು ಗ್ರಾಮಾಂತರ6 months agoಕಾವೇರಿ ಹಾಗೂ ಎತ್ತಿನಹೊಳೆ ನೀರು ಕೊಡಿ ವೃಷಭಾವತಿ ನೀರು ಬೇಡ – ಶಾಸಕ ಧೀರಜ್ ಮುನಿರಾಜ್.
-
ಬೆಂಗಳೂರು ಗ್ರಾಮಾಂತರ6 months agoಕುಡಿಯುವ ನೀರಿಗೆ ಆದ್ಯತೆ, ಕಸಕ್ಕೂ ಮುಕ್ತಿ : ಡಿ.ಕೆ.ಶಿವಕುಮಾರ್
-
ತುಮಕೂರು6 months agoಎತ್ತಿನ ಹೊಳೆ ಯೋಜನೆಯ ಕಾಮಗಾರಿಗಳ ಪರಿಶೀಲನೆ
-
ಬೆಂಗಳೂರು ಗ್ರಾಮಾಂತರ6 months agoಮಿಂಚಿನ ಕಾರ್ಯಾಚರಣೆ. ದರೋಡೆಕೋರರ ಬಂಧನ.
-
ಬೆಂಗಳೂರು ಗ್ರಾಮಾಂತರ5 months agoಪ್ರತಿಭಾ ಪುರಸ್ಕಾರ ಸಮಾರಂಭ
-
ಬೆಂಗಳೂರು ಗ್ರಾಮಾಂತರ5 months agoಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ವ್ಯಸನಗಳಿಂದ ದೂರವಿರಿ:ಡಾ.ನವೀನ್ ಕುಮಾರ್
-
ಬೆಂಗಳೂರು ಗ್ರಾಮಾಂತರ6 months agoಪ್ರತಿಯೊಬ್ಬರೂ ವ್ಯಕ್ತಿತ್ವ, ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು.
-
ಮೈಸೂರು6 months agoಇ-ಸ್ವತ್ತು ನೀಡಲು ಲಂಚ. ವಲಯ ಕಚೇರಿ 4 ರ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ.