ಮೈಸೂರು
ಇ-ಸ್ವತ್ತು ನೀಡಲು ಲಂಚ. ವಲಯ ಕಚೇರಿ 4 ರ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ.
ಮೈಸೂರು: ಇ ಸ್ವತ್ತು ಮಾಡಿಕೊಡಲು ಸಾರ್ವಜನಿಕರೊಬ್ಬರಿಂದ 25 ಸಾವಿರ ಲಂಚ ಸ್ವೀಕರಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಇಬ್ಬರು ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕಂದಾಯ ಅಧಿಕಾರಿ ಎಂ.ಎನ್. ನಂದೀಶ್, ಬಿಲ್ ಕಲೆಕ್ಟರ್ ರಜಾಕ್ ಬಲೆಗೆ ಬಿದ್ದವರು.


ವಲಯ ಕಚೇರಿಯಲ್ಲಿ ಸಾರ್ವಜನಿಕರೋಬ್ಬರು ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ನಂದೀಶ್ ಮತ್ತು ರಜಾಕ್ 25 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು ಈ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.ಇಂದು ಇಬ್ಬರು ನೌಕರರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ಗಳಾದ ಪಿ.ಉಮೇಶ್, ಲೋಕೇಶ್, ರವಿಕುಮಾರ್, ಸಿಬ್ಬಂದಿಗಳಾದ ಆರ್.ಎನ್. ಲೋಕೇಶ್, ಎಚ್.ಎನ್. ಗೋಪಿ, ಲೋಕೇಶ್ ರಾಜೇ ಅರಸ್, ಕಾಂತರಾಜು, ಮೋಹನ್ ಗೌಡ, ಮೋಹನ್ ಕುಮಾರ್,ಲೋಕೇಶ್, ದಿನೇಶ್ ಭಾಗವಹಿಸಿದ್ದಾರೆ
ಮೈಸೂರು
11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಅರಮನೆ ಆವರಣದಲ್ಲಿ ಯೋಗ ಪ್ರದರ್ಶನ.
ಮೈಸೂರು: 11 ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ ಯೋಗಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನ ಗಣ್ಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಬಾರಿ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದಡಿ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ದಿನಾಚರಣೆಯಲ್ಲಿ ಸಾವಿರಾರು ಯೋಗಪಟುಗಳು ಭಾಗಿಯಾಗಿ ವಿವಿದ ಯೋಗ ಭಂಗಿಗಳನ್ನ ಪ್ರದರ್ಶಿಸಿದರು. ಇದೇ ಮೊದಲ ಬಾರಿ ಅಂಧ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಹಲವು ಮಂದಿ ವಿದೇಶಿಗರು ಕೂಡ ಭಾಗಿಯಾಗಿದ್ದರು. ಮೂರು ಬಾರಿ ಶಂಖ ನಾದ ಮೊಳಗಿಸುವ ಮೂಲಕ ಯೋಗಾಸನಕ್ಕೆ ಚಾಲನೆ ನೀಡಲಾಯಿತಯ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಶ್ರೀವತ್ಸ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಮತ್ತಿತರ ಪ್ರಮುಖರು ಭಾಗಿಯಾಗಿದ್ದರು…
-
ಬೆಂಗಳೂರು ಗ್ರಾಮಾಂತರ6 months agoಕಾವೇರಿ ಹಾಗೂ ಎತ್ತಿನಹೊಳೆ ನೀರು ಕೊಡಿ ವೃಷಭಾವತಿ ನೀರು ಬೇಡ – ಶಾಸಕ ಧೀರಜ್ ಮುನಿರಾಜ್.
-
ಬೆಂಗಳೂರು ಗ್ರಾಮಾಂತರ6 months agoಕುಡಿಯುವ ನೀರಿಗೆ ಆದ್ಯತೆ, ಕಸಕ್ಕೂ ಮುಕ್ತಿ : ಡಿ.ಕೆ.ಶಿವಕುಮಾರ್
-
ತುಮಕೂರು6 months agoಎತ್ತಿನ ಹೊಳೆ ಯೋಜನೆಯ ಕಾಮಗಾರಿಗಳ ಪರಿಶೀಲನೆ
-
ಬೆಂಗಳೂರು ಗ್ರಾಮಾಂತರ6 months agoಮಿಂಚಿನ ಕಾರ್ಯಾಚರಣೆ. ದರೋಡೆಕೋರರ ಬಂಧನ.
-
ಬೆಂಗಳೂರು ಗ್ರಾಮಾಂತರ6 months agoಪ್ರತಿಯೊಬ್ಬರೂ ವ್ಯಕ್ತಿತ್ವ, ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು.
-
ಬೆಂಗಳೂರು ಗ್ರಾಮಾಂತರ5 months agoಪ್ರತಿಭಾ ಪುರಸ್ಕಾರ ಸಮಾರಂಭ
-
ಬೆಂಗಳೂರು ಗ್ರಾಮಾಂತರ5 months agoಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ವ್ಯಸನಗಳಿಂದ ದೂರವಿರಿ:ಡಾ.ನವೀನ್ ಕುಮಾರ್
-
ಬೆಂಗಳೂರು ಗ್ರಾಮಾಂತರ6 months agoಗ್ರಂಥಾಲಯಕ್ಕೆ ಕಟ್ಟಡ ನೀಡುವಂತೆ ಕೋರಿ ಮನವಿ