Connect with us

ಬೆಂಗಳೂರು ಗ್ರಾಮಾಂತರ

ವಿಶ್ಬಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸನ್ಮಾನ ಸಮಿತಿಯಿಂದ ಸನ್ಮಾನ ಕಾರ್ಯಕ್ರಮ

Published

on

ದೊಡ್ಡಬಳ್ಳಾಪುರ: ಸನ್ಮಾನ ಸಮಾರಂಭ ವನ್ನು ಕೃತಜ್ಞತಾ ಕಾರ್ಯಕ್ರಮ ಎನ್ನಬಹುದು ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಮಂಜನಾಥಸ್ವಾಮಿ ಹೇಳಿದರು. ಅವರು ನಗರದ ಕೆಎಂಹೆಚ್.ಕಲ್ಯಾಣ ಮಂಟಪ ದಲ್ಲಿ ನಡೆದ ವಿಶ್ಬಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸನ್ಮಾನ ಸಮಿತಿಯಿಂದ ನಡೆದ ಸನ್ಮಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು.

1990 ರಿಂದ ಅವರನ್ನು ನೋಡಿದಾಗ ಹೋರಾಟ ಮಾಡಿ ಸಂಘಟನೆ ಕಟ್ಟಿದ್ದಾರೆ. ವೈಚಾರಿಕ ವಾಗಿ ಒಂದು ಸಮಾಜವನ್ನು ಕಟ್ಟುವುದು ಅಷ್ಟು ಸುಲಭವಲ್ಲ ವಿರೋಧ ಮಾಡಿದ ಜಾಲಪ್ಪ ನವರ ಮಕ್ಕಳನ್ನು ಸಂಘಟನೆ ಸೇರಿಸಿದ್ದು ಅವರ ಸಂಘಟನೆಯ ಶಕ್ತಿ ತೋರಿಸುತ್ತದೆ.

ಕಷ್ಟದ ದಿನಗಳಲ್ಲಿ ಸಂಘಟನೆಯ ಕಟ್ಟಿದ್ದು. ಒಬ್ಬ ವ್ಯಕ್ತಿ ವ್ಯಕ್ತಿತ್ವ ವಿಚಾರ ಬದ್ದನಾಗಿದ್ದರೆ ಮಾತ್ರ ಅವರನ್ನು ಜನ ಗುರುತಿಸಿಲು ಸಾದ್ಯ. 25 ಸಾವಿರ ಜನರಿ ಕಣ್ಣಿನ ಚಿಕಿತ್ಸೆ ಮಾಡಿಸಿದ್ದಾರೆ.ಸಂಪಾದಿಸಿದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು. ನಮಗೆ ಕಷ್ಟ ವಾದರೂ ಪರವಾಗಿಲ್ಲ ಬೆರೆಯವರಿಗೆ ಒಳ್ಳೆಯದಾಗಲಿ ಎಂಬ ಮನಸಿನಿಂದ ದಾನ ಮಾಡುವುದು ನಿಜವಾದ ದರ್ಮ. ಇಂದು ಮಾಡುತ್ತಿರುವ ಸಹಾಯಧನ‌ ಸಾಂಕೇತಿಕ ಅದು ಇತರರಿಗೆ ಪ್ರೇರಣೆ ಕೊಡಲಿ ಅವರ ಮಾಡಿರುವ ಸಾಮಾಜಿಕ ಕಾರ್ಯ ಶಾಶ್ವತ ವಾಗಿ ಉಳಿಯಲಿ ಎಂದರು.

ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ನಿರ್ದೇಶಕ ಹುಲಿಕಲ್ ನಟರಾಜ್ ಮಾತನಾಡಿ

ದೊಡ್ಡಬಳ್ಳಾಪುರಕ್ಕೆ ಯಾರಾದರೂ ಬಂದಾಗ ಮೊದಲ ಹನುಮಂತರಾಯ್ಪ ಮನೆಗೆ‌ ಭೇಟಿ ನೀಡುತ್ತಿದ್ದರು.
ಯಾವುದೇ ರಾಜ್ಯ ಮಟ್ಟದ ಕಾರ್ಯಕ್ರಮ ದಲ್ಲಿ ಇವರು ಇರುತ್ತಾರೆ ಹಿದ್ದಲಗಿಡ ಮದ್ದಲ್ಲ ಎಂಬಂತೆ ಅವರು ಮಾಡಿರುವ ಸೇವಾ ಕಾರ್ಯಗಳು ಸಾಕಷ್ಟಿದೆ. ಅವರು ಬಂದ ಸಂಬಳವನ್ನು ಪೌರ ಕಾರ್ಮಿಕ ಹಂಚಿದ್ದಾರೆ.
.
ತೊಂದರೆ ಯಲ್ಲಿರುವ ನಮ್ಮ ಕಾರ್ಯಕರ್ತರಿಗೆ ಧನಸಹಾಯ ಮಾಡವುದು ಅವರಿಗೆ ಆರ್ಥಿಕ ಭದ್ರತೆ ಇರಬೇಕು. ಅವರು ಆರಂಭ ಚಿಂತನೆಗಳು ನೋಡಿದಾಗ ದೊಡ್ಡ ಬಳ್ಳಾಪುರ ಬಸ್ ನಿಲ್ದಾಣ ಸುತ್ತಮುತ್ತಲಿನ ಜಾಗದಲ್ಲಿ ವ್ಯಾಪಾರದ ಮಳಿಗೆಗೆ ಮಾಡಿ ಒಂದು ತಿಂಗಳಿಗೆ 50 ಲಕ್ಷ ಆದಾಯ ಮಾಡಿದರು.ಲಯನ್ಸ ಕ್ಲಬ್ ಅದ್ಯಕ್ಷರಾದ ನಂತರ ಹಳೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಡಯಾಲಿಸಿಸ್ ಚಿಕಿತ್ಸೆ ಕೇಂದ್ರ ಆರಂಬಿಸಿದ್ದು ಅವರ ಸಾದನೆ‌ ಎಂದರು.

ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅದ್ಯಕ್ಷ ಕೆ ಎಂ ಹನುಮಂತರಾಯಪ್ಪ ಮಾತನಾಡಿ ಈ ದೇಶ ಕಂಡಂತಹ ಅಪ್ರತಿಮ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾರ್ಗದರ್ಶನ ಅವರ ಸೇವೆ ಅಪಾರ ವಾಗಿದೆ. ಆ ನಿಟ್ಟಿನಲ್ಲಿ. ನನಗೆ ಬಂದ ಎಲ್ಲ ಸಂಬಳವನ್ನು ಸ್ವಯಂ ಸೇವಕ ರಿಗೆ ನೀಡಿದೆ. ಅನಂತಕುಮಾರ್, ಸದಾನಂದ ‌ಗೌಡರ ಸಹಕಾರ ಸಾಕಷ್ಟಿದೆ.ದೇಶವನ್ನು ಸುತ್ತಿ ರೇಷ್ಮೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 3000 ಕೋಟಿ ಅನುದಾನ ಹೆಚ್ಚಿಸಲು ಶ್ರಮ ವಹಿಸಿದೆ.

ವಾಜಪೇಯಿ ಅವರಿಗೆ ಸನ್ಮಾನ ಮಾಡಿದ್ದೇನೆ. ಅಡ್ವಾಣಿ ಆತ್ಮೀಯತೆ ನನಗೆ ಆದರ್ಶವಾಗಿದೆ. ಎಲ್ಲರೂ ಚೆನ್ನಾಗಿ ಸಂಪಾದನೆ ಮಾಡಿ ಚೆನ್ನಾಗಿ ದಾನ ದರ್ಮ ಮಾಡುವುದನ್ನು ಕಲಿಯಬೇಕು ಎಂದರು. ಇಂದು ಸಮಿತಿಯಿಂದ 60 ಜನರಿಗೆ ಧನ ಸಹಾಯ ವನ್ನು ನೀಡಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮ ದಲ್ಲಿ ಪುಷ್ಪಾಂಡಜ ಸ್ವಾಮೀಜಿ, ಬಿಜೆಪಿ ಹಿರಿಯ ಮುಖಂಡ ಡಿವಿ. ನಾರಾಯಣ ಶರ್ಮ, ಜೋನಾ ಮಲ್ಲಿಕಾರ್ಜುನ, ಬಿವಿ.ನಾರಾಯಣ,ಜೆ ರಾಜೇಂದ್ರ, ನಾಗೇಶ, ಎಂ ಬಿ ನಾಗರಾಜ್, ನಂಜಪ್ಪ, ಬಮೂಲ್ ನಿರ್ದೇಶಕ ಬಿ ಸಿ ಆನಂದ್, ಟಿ ರಂಗರಜ್, ನಗರಸಭೆ ಸದಸ್ಯರಾದ ಬಂತಿ ವೆಂಕಟೇಶ್, ವತ್ಸಲಾ, ಬಿಜೆಪಿ ಮುಖಂಡರಾದ ಎನ್ ಕೆ ರಮೇಶ, ಗುರುಲಿಂಗಯ್ಯ, ರಾಮಾಂಜಿನಪ್ಪ, ಕೆ ಮೋಹನ್ ಕುಮಾರ್, ಆರ್ ಬಸವರಾಜ್, ಶ್ರೀನಿವಾಸ್,  ವತ್ದಲಾ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು ಗ್ರಾಮಾಂತರ

ಪ್ರತಿಭಾ ಪುರಸ್ಕಾರ ಸಮಾರಂಭ

Published

on

By

ದೊಡ್ಡಬಳ್ಳಾಪುರ: ನಗರದ ಕನ್ನಡ ಜಾಗೃತ ಭವನದಲ್ಲಿ ಛಲವಾದಿ ಮಹಾಸಭಾದ ವತಿಯಿಂದ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಛಲವಾದಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಬೋದಿವೃಕ್ಷಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಛಲವಾದಿ ಮಹಾಸಭಾದ ರಾಜ್ಯಧ್ಯಕ್ಷರಾದ ಶ್ರೀ ವಾಣಿ ಕೆ. ಶಿವರಾಮ್ ರವರು ಕಡುಬಡತನದ ವಾತಾವರಣದಲ್ಲಿ ಹುಟ್ಟಿಬೆಳೆದು, ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಕೊಂಡು, ಇಡೀ ಕರ್ನಾಟಕದಲ್ಲೇ ಮೊದಲಿಗರಾಗಿ,ಕನ್ನಡ ಭಾಷೆಯಲ್ಲಿ ಐ ಎ ಎಸ್ ಪರೀಕ್ಷೆಯನ್ನು ಪಾಸು ಮಾಡಿ, ಉನ್ನತ ಅಧಿಕಾರಿಯಾಗಿ, ಬಹುತೇಕ ಬಡವರಿಗಾಗಿ ಉತ್ತಮ ಸೇವೆಯನ್ನು ನೀಡಿ,ಉತ್ತಮ ಸಮಾಜ ಸೇವಕರಾದ.ಶಿವರಾಮ್ ರವರನ್ನು ಛಲವಾದಿ ಸಮುದಾಯದ ವಿದ್ಯಾರ್ಥಿಗಳು ಅನುಸರಿಸುವ ಮೂಲಕ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದ ಅವರು ಛಲವಾದಿ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗವಹಿಸಿ, ಮಾತನಾಡಿದ ಡಾ: ದೇವರಾಜ್ ರವರು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಇವರು, ಎಲ್ಲಾ ಸಮಾಜದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸಲು ಉತ್ತಮವಾದ ವಾತಾವರಣ ಕಲ್ಪಿಸಿಕೊಡುವುದಲ್ಲದೇ, ವಿದ್ಯಾರ್ಥಿಗಳ ಕಡೆಗೆ ಹೆಚ್ಚು ಗಮನ ವಹಿಸಬೇಕಿದೆ. ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದು ಕಿವಿ ಮಾತು ಹೇಳಿದ ಅವರು ಸರ್ಕಾರವು ಸಮಾಜ ಕಲ್ಯಾಣ ಇಲಾಖೆವತಿಯಿಂದ ಉನ್ನತ ಶಿಕ್ಷಣಕ್ಕಾಗಿ sc/st ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿಗಳವರೆಗೆ ಪ್ರೋತ್ಸಾಹ ಧನ ನೀಡುತ್ತಿದೆ. ಈ ಯೋಜನೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸುತ್ತಾ, ಸರ್ಕಾರದ ಯೋಜನೆಗಳ ಕುರಿತು ವಿವರಣೆ ನೀಡಿದರು.

ಆಕಾಶವಾಣಿ ಕಾರ್ಯಕ್ರಮ ಗಳ ನಿರ್ಮಾಪಕರು ಹಾಗೂ ನಿವೃತ್ತ ನಿರ್ದೇಶಕರು ಮತ್ತು ಕವಿಗಳು, ಚಿಂತಕರೂ ಆದ “ಸುಬ್ಬು ಹೊಲೆಯಾರ್ “ರವರು ಮಾತನಾಡಿ ನಮ್ಮನ್ನ ಆಳುತ್ತಿರುವ ಸರ್ಕಾರಗಳು ನೈಜ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಣದ ದಿಕ್ಕನ್ನೇ ಬದಲಾಯಿಸಿ, ಪುರಾತನ ಕಾಲದ ಶಿಕ್ಷಣ ಪದ್ದತಿಯ ಕಡೆಗೆ ಎಳೆದು ತರುವ ಪ್ರಯತ್ನ ನಡೆಸಲಾಗುತ್ತಿದೆ. ಇದು ನಿಲ್ಲಬೇಕು?. ಮೌಲ್ಯಯುತ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದ ಅವರು ಇತ್ತೀಚಿಗೆ ಕೃತಕ ಬುದ್ದಿಮತ್ತೆಯಂತಹ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳು ನೋಡುತ್ತಿರುವುದನ್ನು ಗಮನಿಸಿದ್ದೆನೇ. ಇದರ ಕಡೆಗೆ ಹೆಚ್ಚು ಗಮನ ನೀಡದೆ, ಎಲ್ಲಾ ಮಾಹಿತಿಗಳಿಗೂ ಮೊಬೈಲ್ ಗಳ ಮೊರೆ ಹೋಗದೇ, ವಿಕ್ಷಣೆ ನಿಲ್ಲಿಸಿ, ಒಳ್ಳೆಯದನ್ನಷ್ಟೇ ಉಪಯೋಗಿಸಿಕೊಂಡು, ಒಂದು ದಿನಕ್ಕೆ ಕನಿಷ್ಠ ಐದು ಗಂಟೆಗಳ ಕಾಲ ಓದಿನ ಕಡೆಗೆ ಗಮನ ಹರಿಸಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಛಲವಾದಿ ಸಮುದಾಯದ ವಿದ್ಯಾರ್ಥಿಗಳಿಗೆ ಶ್ರೀ ದೀಪಂಕರ ಮೈತ್ರೆಯ ಸೋಷಿಯಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಪುರಸ್ಕೃತ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡಿ, ಪ್ರೋತ್ಸಾಹಿಸಲಾಯ್ತು.

ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷರಾದ ಸಿ. ಗುರುರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೋಲಿಗೆರೆಯ ನಿವೃತ್ತ ಅಭಿಯಂತರರಾದ ಕುಮಾರಸ್ವಾಮಿ ರವರು ಮತ್ತು ಹೊಸಕೋಟೆಯ ಸಾದರಬೀದಿಯ ಮುರಳಿ ರವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮವನ್ನು ಹಿರಿಯರಾದ ಬಿ. ದೊಡ್ಡರಂಗಪ್ಪ ರವರು ನಿರೂಪಿಸಿದರೆ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಿ ಎನ್ ಎಲ್ ಎನ್ ಮೂರ್ತಿ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷರಾದ ಕೊನಘಟ್ಟದ ಎ. ಮುನಿಕೃಷ್ಣ ಪ್ಪ, ಗೂಳ್ಯ ಮುನಿದಾಸಪ್ಪ, ಸಕ್ಕರೆ ಗೊಲ್ಲಹಳ್ಳಿಯ ಹನುಮಂತಯ್ಯ, ಆರೂಢಿಯ ಲಕ್ಷ್ಮೀಪತಿ, ಕೃಷ್ಣಪ್ಪ, ದೊಡ್ಡಬೆಳವಂಗಲ ಹೋಬಳಿ ಘಟಕದ ಎನ್. ಉದಯಶಂಕರ್, ಮಧುರೆ ಹೋಬಳಿಯ ವೆಂಕಟೇಶ್, ತೂಬಗೆರೆಯ ವೆಂಕಟೇಶ್, ದಯಾನಂದ, ಶಂಕರ್ ಕಚೇರಿಪಾಳ್ಯ,ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮೇನಕಮ್ಮ, ಹಮಾಮ್ ರತ್ನಮ್ಮ, ಲಕ್ಷ್ಮಣ, ಗಂಟಿಗಾನಳ್ಳಿಯ ಮುನಿಯಮ್ಮ, ರವಿ, ಕೊನಘಟ್ಟದ ಹರೀಶ್ ಮತ್ತು ಸಂಗಡಿಗರು ಹಾಗೂ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Continue Reading

ಬೆಂಗಳೂರು ಗ್ರಾಮಾಂತರ

ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ವ್ಯಸನಗಳಿಂದ ದೂರವಿರಿ:ಡಾ.ನವೀನ್ ಕುಮಾರ್

Published

on

By

ದೊಡ್ಡಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿ ಯಾಗುತ್ತಿರುವುದು ಆತಂಕದ ವಿಷಯ ವಾಗಿದ್ದು ಆ ನಿಟ್ಟಿನಲ್ಲಿ ಯುವ ಸಮುದಾಯವನ್ನು ಜಾಗೃತಿ ಗೊಳಿಸಬೇಕಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಡಾ. ಎಂ ಬಿ ನವೀನ್ ಕುಮಾರ್ ಹೇಳಿದರು

ಅವರು ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಯಿಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಕರ ಶಕ್ತಿಯನ್ನು ಹಾಳುಗೆಡವಲು ಮಾದಕ ವ್ಯಸನವು ಭೂತದ ತರ ಕಾಡುತಿದ್ದು ಬೀಡಿ.ಸಿಗರೇಟ್ ಮದ್ಯಪಾನ ಜೂಜಾಟ ದಂತಹ ಅನೇಕ ದುಶ್ಚಟಗಳಿಂದ ವಿದ್ಯಾರ್ಥಿ ಗಳು ಹಾಗು ಯುವಜನತೆ ಒಳಗಾಗಬಾರದು. ನಮಗಿರುವ ಸಮಯದಲ್ಲಿ ಎಂಟು ಘಂಟೆ ನಿದ್ದೆ ಮತ್ತು ಊಟ ಮತ್ತು ಸ್ವಚ್ಚತೆಗೆ ಮೀಸಲಿಟ್ಟು ದಿನದಲ್ಲಿ ಕನಿಷ್ಟ ಐದು ಘಂಟೆ ಗಳ ಕಾಲ ಓದಿಗೆ ಮೀಸಲಿಟ್ಟು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕು.

ಕಾಲೇಜ್ ವಿದ್ಯಾರ್ಥಿಗಳು ಅತಿ ಹೆಚ್ಚು ಇಂತಹ ದುಷ್ಟಗಳಿಗೆ ಬಲಿಯಾಗುತ್ತಿದ್ದು ನಾವು ಅವರಿಗೆ ಅವಶ್ಯಕ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕಾಗಿದೆ. ಜೀವನ ಶೈಲಿ ಬದಲಾದಂತೆ ನಮ್ಮ ಬದುಕನ್ನು ಸದೃಢಗೊಳಿಸಲು ಇಂಥ ದುಷ್ಟಗಳಿಂದ ದೂರವಿರಬೇಕಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಜೀವನವನ್ನು ಇದಕ್ಕೆ ಬಲಿಕೊಡದೆ ಜಾಗೃತರಾಗಬೇಕು ಎಂದರು.

ನಂತರ ಗ್ರಾಮಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸಾಧಿಕ್ ಪಾಷ ಮಾತನಾಡಿ ಇಂದು ವಿದ್ಯಾರ್ಥಿಗಳು ಅತಿ ಹೆಚ್ಚು ದಾರಿತಪ್ಪುತ್ತಿರುವುದು ಸಾಮಾಜಿಕ ಜಾಲತಾಣದಿಂದ. ಮೊಬೈಲ್ ಗೀಳು ಅಂಟಿಕೊಂಡು ವಾಟ್ಸಪ್ ಫೇಸ್ಬುಕ್ ಅತಿ ಹೆಚ್ಚು ನೋಡುವುದು. ಸೋಷಿಯಲ್ ಮೀಡಿಯಾದಿಂದ ಆಗುವ ಸೈಬರ್ ವಂಚನೆ ,ಆನ್ ಲೈನ್ ಗೇಮಿಂಗ್ ರಮ್ಮೀ ಆಪ್ ಗಳಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು. ಇತ್ತೀಚೆಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಎಂಬ ಅಸ್ತ್ರ ಬಳಸಿ ಅನೇಕರಿಂದ ಹಣ ಸುಲಿಗೆ ಮಾಡುತಿದ್ದು ಇಂತಹ ಬಲೆಗಳಿಗೆ ಸಿಲುಕಿದ ವರು ತಕ್ಷಣ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು. ನಮ್ಮ ಅನೇಕ ಸಮಸ್ಯೆಗಳಿಗೆ ನೇರವಾಗಿ ಈ ಸಾಮಾಜಿಕ ಜಾಲತಾಣಗಳೆ ಕಾರಣವಾಗಿದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದರು.

ನಂತರ ನಗರ ಠಾಣೆ ಅಮರೇಶ್ ಗೌಡ ಮಾತನಾಡಿ ಎಲ್ಲರೂ ಕಡ್ಡಾಯ ವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದ ರಿಂದ ಅಪಘಾತಗಳನ್ನು ತಡೆಯಬಹುದು. . ವಿದ್ಯಾರ್ಥಿಗಳು 18 ವರ್ಷ ತುಂಬುವ ತನಕ ವಾಹನಗಳನ್ನು ಚಲಾಯಿಸ ಬಾರದು. ಕಡ್ಡಾಯವಾಗಿ ಪರವಾನಿಗೆ ಪಡೆದು ವಾಹನಗಳನ್ನು ಚಲಾಯಿಸಬೇಕು.

ಹೆಲ್ಮೆಟ್ ಹಾಕುವುದು ಕಾರಲ್ಲಿ ಸೀಟ್ ಬೆಲ್ಟ್ ದರಿಸುವುದು, ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನಿಯಮಗಳನ್ನು ಪಾಲನೆ ಮಾಡುವುದು ಅತಿ ಮುಖ್ಯವಾಗಿದೆ.

ವಿದ್ಯಾರ್ಥಿಗಳು ಹಾಗು ಯುವ ಜನತೆ ಐ.ಪಿ.ಎಲ್ ಬೆಟ್ಟಿಂಗ್ ನಂತಹ ದುಶ್ಚಟದಿಂದ ದೂರವಿರಬೇಕು ಮತ್ತು ಅಪ್ರಾಪ್ತರು ಯಾವುದೇ ಕಾರಣಕ್ಕೂ ವಾಹನ ಚಲಾಹಿಸ ಬಾರದು. ಚಲಾಯಿಸಿದಲ್ಲಿ ವಾಹನದ ಮಾಲಿಕರಿಗೆ ದಂಡ ಹಾಗು ಒಂದು ವರ್ಷದ ಜೈಲು ಶಿಕ್ಷೆಯು ಅನುಭವಿಸ ಬೇಕಾಗಿತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯ ನಿರತ ಪತ್ರ ಕರ್ತರ ಸಂಘದ ತಾಲೂಕು ಅಧ್ಯಕ್ಷ ಚಂದ್ರ ಶೇಖರ್.ಡಿ.ಉಪ್ಪಾರ್,ವಕೀಲ ವಿಜಯ್ ಕುಮಾರ್,ಮಾಹಿತಿ ಹಕ್ಕು ಕಾರ್ಯ ಕರ್ತರ ವೇದಿಕೆ ರಾಜ್ಯ ಸಂಚಾಲಕ ಕೆಹೆಚ್. ವೆಂಕಟೇಶ್,ರಾಜ್ಯ ಪ್ರದಾನ ಕಾರ್ಯದರ್ಶಿ ರಾಘವೇಂದ್ರ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಎಂ ಸತೀಶ್ , ಉಪಾದ್ಯಕ್ಷ ಸುಮೇಶ್, ವಿನಯಗೌಡ, ಸಂಘಟನ ಕಾರ್ಯದರ್ಶಿ ಶಂಕರನಾಗ್, ಹೋಬಳಿ ಆದ್ಯಕ್ಷ ದರ್ಶನ್, ಉಪನ್ಯಾಸಕ ರಾದ ಭಾಸ್ಕರ್,ಪ್ರಭಾಕರ್,ಸತೀಶ್ ಸೇರಿ ದಂತೆ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಜರಿದ್ದರು.

Continue Reading

ಬೆಂಗಳೂರು ಗ್ರಾಮಾಂತರ

ಲೋಕಾ ಬಲೆಗೆ ಬಿದ್ದ ಗ್ರೇಡ್ 2 ತಹಶೀಲ್ದಾರ್ ದಿವಾಕರ್: ಒಂದೂವರೆ ಲಕ್ಷ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್.

Published

on

By

ಒಂದೂವರೆ ಲಕ್ಷ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಗ್ರೇಡ್ 2 ತಹಶೀಲ್ದಾರ್ ದಿವಾಕರ್. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್ ಅವರು ದೂರುದಾರರಿಂದ ಸುಮಾರು ಒಂದೂವರೆ ಲಕ್ಷ ಲಂಚ ಪಡೆಯುವ ವೇಳೆ ಲೋಕಾಯುಕ್ತ ಆಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನೆಲಮಂಗಲ ತಾಲೂಕಿನ ಗಿರಿಯನಪಾಳ್ಯದ ಸರ್ವೇ 1/1A1 ರೀ ಪೋಡಿ 1/4, 1/7. 8 .20 ಗುಂಟೆ ಕೋರ್ಟ್ ಸೇಲ್ ಡೀಡ್ ಪ್ರಕಾರ ಖಾತೆ ಮಾಡಬೇಕಾಗಿತ್ತು, ಇದನ್ನು ಮಾಡಿಕೊಡಲು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್ ಅವರು ದೂರುದಾರ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿಯ ವಕೀಲರಾದ ದೊರೆಸ್ವಾಮಿ.ಎಲ್ ಅವರ ಬಳಿ ಸುಮಾರು 2ಲಕ್ಷ ಬೇಡಿಕೆ ಇಟ್ಟಿದ್ದರು, ಒಂದೂವರೆ ಲಕ್ಷ ಕೊಡುವಂತೆ ಮಾತುಕತೆ ಆಗಿತ್ತು, ಅದರ ಪ್ರಕಾರ ಇಂದು ದೇವನಹಳ್ಳಿ ಬಳಿ ಮಾತುಕತೆ ಪ್ರಕಾರ ಒಂದೂವರೆ ಲಕ್ಷ ನೀಡುವಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಮತ್ತು ತಂಡ ದಾಳಿ ನಡೆಸಿ ಬಂಧಿಸಲಾಗಿದೆ. ಸದ್ಯ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಹೆಚ್ಚಿನ‌ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Continue Reading

Trending

Copyright © 2025 Vaastava News.