Connect with us

ತುಮಕೂರು

ಎತ್ತಿನ ಹೊಳೆ ಯೋಜನೆಯ ಕಾಮಗಾರಿಗಳ ಪರಿಶೀಲನೆ

Published

on

ತುಮಕೂರು: ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ ಜಿಲ್ಲೆಗಳಾದ ತುಮಕೂರು ,ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಸಂಪರ್ಕವನ್ನು ಕಲ್ಪಿಸಲು ಕಾಮ ಗಾರಿಗಳು ನಡೆಯುತ್ತಿದ್ದು ಇಂದು ಉಪ‌ ಮುಖ್ಯಮಂತ್ರಿ ಡಿಕೆ.ಶಿವ ಕುಮಾರ್ ರವರೊಂದಿಗೆ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬೈರಗೊಂಡಲು ಜಲಾಶಯ ನಿರ್ಮಾಣದ ಕಾಮಗಾರಿಗಳನ್ನು ಹಾಗೂ ದೊಡ್ಡಬಳ್ಳಾಪುರದ ಆಲಪನಹಳ್ಳಿಯ ಮೂಲಕ ಕೋಲಾರಕ್ಕೆ ನೀರನ್ನು ಲಿಪ್ಟ್ ಮಾಡುವ ಕಾಮಗಾರಿಗಳನ್ನು ಅಧಿಕಾರಿ ಗಳೊಂದಿಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಾದ ದೀರಜ್ ಮುನಿರಾಜು,ಮಾಜಿ ಶಾಸಕ ವೆಂಕಟ ರಮಣಯ್ಯ, ಜಲನಿಗಮದ ನಿರ್ದೇಶಕರಾದ ಚನ್ನಚಿತ್ತಯ್ಯ,ಹಾಗೂ ಹಿರಿಯ ಅಭಿಯಂತರರು ಉಪಸ್ಥಿತರಿದ್ದರು.

Trending

Copyright © 2025 Vaastava News.