ಬೆಂಗಳೂರು ಗ್ರಾಮಾಂತರ
ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ವ್ಯಸನಗಳಿಂದ ದೂರವಿರಿ:ಡಾ.ನವೀನ್ ಕುಮಾರ್
ದೊಡ್ಡಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿ ಯಾಗುತ್ತಿರುವುದು ಆತಂಕದ ವಿಷಯ ವಾಗಿದ್ದು ಆ ನಿಟ್ಟಿನಲ್ಲಿ ಯುವ ಸಮುದಾಯವನ್ನು ಜಾಗೃತಿ ಗೊಳಿಸಬೇಕಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಡಾ. ಎಂ ಬಿ ನವೀನ್ ಕುಮಾರ್ ಹೇಳಿದರು
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಯಿಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರ ಶಕ್ತಿಯನ್ನು ಹಾಳುಗೆಡವಲು ಮಾದಕ ವ್ಯಸನವು ಭೂತದ ತರ ಕಾಡುತಿದ್ದು ಬೀಡಿ.ಸಿಗರೇಟ್ ಮದ್ಯಪಾನ ಜೂಜಾಟ ದಂತಹ ಅನೇಕ ದುಶ್ಚಟಗಳಿಂದ ವಿದ್ಯಾರ್ಥಿ ಗಳು ಹಾಗು ಯುವಜನತೆ ಒಳಗಾಗಬಾರದು. ನಮಗಿರುವ ಸಮಯದಲ್ಲಿ ಎಂಟು ಘಂಟೆ ನಿದ್ದೆ ಮತ್ತು ಊಟ ಮತ್ತು ಸ್ವಚ್ಚತೆಗೆ ಮೀಸಲಿಟ್ಟು ದಿನದಲ್ಲಿ ಕನಿಷ್ಟ ಐದು ಘಂಟೆ ಗಳ ಕಾಲ ಓದಿಗೆ ಮೀಸಲಿಟ್ಟು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕು.
ಕಾಲೇಜ್ ವಿದ್ಯಾರ್ಥಿಗಳು ಅತಿ ಹೆಚ್ಚು ಇಂತಹ ದುಷ್ಟಗಳಿಗೆ ಬಲಿಯಾಗುತ್ತಿದ್ದು ನಾವು ಅವರಿಗೆ ಅವಶ್ಯಕ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕಾಗಿದೆ. ಜೀವನ ಶೈಲಿ ಬದಲಾದಂತೆ ನಮ್ಮ ಬದುಕನ್ನು ಸದೃಢಗೊಳಿಸಲು ಇಂಥ ದುಷ್ಟಗಳಿಂದ ದೂರವಿರಬೇಕಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಜೀವನವನ್ನು ಇದಕ್ಕೆ ಬಲಿಕೊಡದೆ ಜಾಗೃತರಾಗಬೇಕು ಎಂದರು.
ನಂತರ ಗ್ರಾಮಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸಾಧಿಕ್ ಪಾಷ ಮಾತನಾಡಿ ಇಂದು ವಿದ್ಯಾರ್ಥಿಗಳು ಅತಿ ಹೆಚ್ಚು ದಾರಿತಪ್ಪುತ್ತಿರುವುದು ಸಾಮಾಜಿಕ ಜಾಲತಾಣದಿಂದ. ಮೊಬೈಲ್ ಗೀಳು ಅಂಟಿಕೊಂಡು ವಾಟ್ಸಪ್ ಫೇಸ್ಬುಕ್ ಅತಿ ಹೆಚ್ಚು ನೋಡುವುದು. ಸೋಷಿಯಲ್ ಮೀಡಿಯಾದಿಂದ ಆಗುವ ಸೈಬರ್ ವಂಚನೆ ,ಆನ್ ಲೈನ್ ಗೇಮಿಂಗ್ ರಮ್ಮೀ ಆಪ್ ಗಳಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು. ಇತ್ತೀಚೆಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಎಂಬ ಅಸ್ತ್ರ ಬಳಸಿ ಅನೇಕರಿಂದ ಹಣ ಸುಲಿಗೆ ಮಾಡುತಿದ್ದು ಇಂತಹ ಬಲೆಗಳಿಗೆ ಸಿಲುಕಿದ ವರು ತಕ್ಷಣ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು. ನಮ್ಮ ಅನೇಕ ಸಮಸ್ಯೆಗಳಿಗೆ ನೇರವಾಗಿ ಈ ಸಾಮಾಜಿಕ ಜಾಲತಾಣಗಳೆ ಕಾರಣವಾಗಿದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದರು.
ನಂತರ ನಗರ ಠಾಣೆ ಅಮರೇಶ್ ಗೌಡ ಮಾತನಾಡಿ ಎಲ್ಲರೂ ಕಡ್ಡಾಯ ವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದ ರಿಂದ ಅಪಘಾತಗಳನ್ನು ತಡೆಯಬಹುದು. . ವಿದ್ಯಾರ್ಥಿಗಳು 18 ವರ್ಷ ತುಂಬುವ ತನಕ ವಾಹನಗಳನ್ನು ಚಲಾಯಿಸ ಬಾರದು. ಕಡ್ಡಾಯವಾಗಿ ಪರವಾನಿಗೆ ಪಡೆದು ವಾಹನಗಳನ್ನು ಚಲಾಯಿಸಬೇಕು.
ಹೆಲ್ಮೆಟ್ ಹಾಕುವುದು ಕಾರಲ್ಲಿ ಸೀಟ್ ಬೆಲ್ಟ್ ದರಿಸುವುದು, ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನಿಯಮಗಳನ್ನು ಪಾಲನೆ ಮಾಡುವುದು ಅತಿ ಮುಖ್ಯವಾಗಿದೆ.
ವಿದ್ಯಾರ್ಥಿಗಳು ಹಾಗು ಯುವ ಜನತೆ ಐ.ಪಿ.ಎಲ್ ಬೆಟ್ಟಿಂಗ್ ನಂತಹ ದುಶ್ಚಟದಿಂದ ದೂರವಿರಬೇಕು ಮತ್ತು ಅಪ್ರಾಪ್ತರು ಯಾವುದೇ ಕಾರಣಕ್ಕೂ ವಾಹನ ಚಲಾಹಿಸ ಬಾರದು. ಚಲಾಯಿಸಿದಲ್ಲಿ ವಾಹನದ ಮಾಲಿಕರಿಗೆ ದಂಡ ಹಾಗು ಒಂದು ವರ್ಷದ ಜೈಲು ಶಿಕ್ಷೆಯು ಅನುಭವಿಸ ಬೇಕಾಗಿತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯ ನಿರತ ಪತ್ರ ಕರ್ತರ ಸಂಘದ ತಾಲೂಕು ಅಧ್ಯಕ್ಷ ಚಂದ್ರ ಶೇಖರ್.ಡಿ.ಉಪ್ಪಾರ್,ವಕೀಲ ವಿಜಯ್ ಕುಮಾರ್,ಮಾಹಿತಿ ಹಕ್ಕು ಕಾರ್ಯ ಕರ್ತರ ವೇದಿಕೆ ರಾಜ್ಯ ಸಂಚಾಲಕ ಕೆಹೆಚ್. ವೆಂಕಟೇಶ್,ರಾಜ್ಯ ಪ್ರದಾನ ಕಾರ್ಯದರ್ಶಿ ರಾಘವೇಂದ್ರ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಎಂ ಸತೀಶ್ , ಉಪಾದ್ಯಕ್ಷ ಸುಮೇಶ್, ವಿನಯಗೌಡ, ಸಂಘಟನ ಕಾರ್ಯದರ್ಶಿ ಶಂಕರನಾಗ್, ಹೋಬಳಿ ಆದ್ಯಕ್ಷ ದರ್ಶನ್, ಉಪನ್ಯಾಸಕ ರಾದ ಭಾಸ್ಕರ್,ಪ್ರಭಾಕರ್,ಸತೀಶ್ ಸೇರಿ ದಂತೆ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಜರಿದ್ದರು.