Uncategorized
ಸಾಧಕರ ಸನ್ಮಾನಕ್ಕಾಗಿ ಅರ್ಜಿ ಆಹ್ವಾನ
ದೊಡ್ಡಬಳ್ಳಾಪುರ : 2025-26ನೇ ಸಾಲಿನ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಲು ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ 2025-26ನೇ ಸಾಲಿನ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಸನ್ಮಾನಕ್ಕೆ ಆಯ್ಕೆ ಸಮಿತಿಯ ಜೊತೆ ಸಭೆ ನಡೆಸಿದ ನಂತರ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆ ಮಾಡಿದ ಸಾಧಕರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸನ್ಮಾನ ಸಮಿತಿ ಅಧ್ಯಕ್ಷರು ಆದ ಶಂಕರಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನ್ಮಾನಕ್ಕೆ ಸಾಹಿತ್ಯ ವೈದ್ಯಕೀಯ, ಸೃಜನಾತ್ಮಕ ಕಲೆ, ಸೇನೆ, ಕ್ರೀಡೆ, ಸಮಾಜ ಸೇವೆ ಕಾರ್ಮಿಕ ಶಿಕ್ಷಣ,ಸಾಂಸ್ಕೃತಿಕ, ಪತ್ರಿಕೋದ್ಯಮ, ರಂಗಭೂಮಿ, ಪ್ರಗತಿಪರ ಹೋರಾಟ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿರುವ ಸಾಧಕರು ತಮ್ಮ ಇತ್ತೀಚಿನ ಬಾವಚಿತ್ರ ದೂರವಾಣಿ ಸಂಖ್ಯೆ ಮತ್ತು ತಮ್ಮ ಕ್ಷೇತ್ರದಲ್ಲಿ ಸೇವೆ ಮಾಡಿದ ಸಂಪೂರ್ಣ ಮಾಹಿತಿ ಯ ಯಶೋಗಾತೆಯನ್ನು ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡ ಮಾಹಿತಿ ವಿವಿದ ಸಂಘಟಣೆಗಳು ನೀಡಿದ ಪ್ರಶಸ್ತಿಪತ್ರಗಳ ಪ್ರತಿಗಳು ಇನ್ನೂ ಮಂತಾದ ದಾಖಲೆಗಳ ಜೆರಾಕ್ಷಗಳನ್ನು ಒಳಗೊಂಡ ಸಂಪೂರ್ಣವಾದ ಮಾಹಿತಿಯನ್ನು ಹೊಂದಿದ ಅರ್ಜಿಯನ್ನು ದಿನಾಂಕ 11-08-2025 ರ ಮದ್ಯಾನ್ಹ 2-00 ಗಂಟೆಯೊಳಗೆ ತಾಲ್ಲೂಕು ಕಛೇರಿ ದೊಡ್ಡಬಳ್ಳಾಪುರ ಇಲ್ಲಿ ಸಲ್ಲಿಸಿಸುವುದು ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.