ಮೈಸೂರು

ಇ-ಸ್ವತ್ತು ನೀಡಲು ಲಂಚ. ವಲಯ ಕಚೇರಿ 4 ರ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ.

Published

on

ಮೈಸೂರು: ಇ ಸ್ವತ್ತು ಮಾಡಿಕೊಡಲು ಸಾರ್ವಜನಿಕರೊಬ್ಬರಿಂದ 25 ಸಾವಿರ ಲಂಚ ಸ್ವೀಕರಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಇಬ್ಬರು ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕಂದಾಯ ಅಧಿಕಾರಿ ಎಂ.ಎನ್. ನಂದೀಶ್, ಬಿಲ್ ಕಲೆಕ್ಟರ್ ರಜಾಕ್ ಬಲೆಗೆ ಬಿದ್ದವರು.

ವಲಯ ಕಚೇರಿಯಲ್ಲಿ ಸಾರ್ವಜನಿಕರೋಬ್ಬರು ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ನಂದೀಶ್ ಮತ್ತು ರಜಾಕ್ 25 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು ಈ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.ಇಂದು ಇಬ್ಬರು ನೌಕರರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಪಿ.ಉಮೇಶ್, ಲೋಕೇಶ್, ರವಿಕುಮಾರ್, ಸಿಬ್ಬಂದಿಗಳಾದ ಆರ್.ಎನ್. ಲೋಕೇಶ್, ಎಚ್.ಎನ್. ಗೋಪಿ, ಲೋಕೇಶ್ ರಾಜೇ ಅರಸ್, ಕಾಂತರಾಜು, ಮೋಹನ್ ಗೌಡ, ಮೋಹನ್ ಕುಮಾರ್,ಲೋಕೇಶ್, ದಿನೇಶ್ ಭಾಗವಹಿಸಿದ್ದಾರೆ

Leave a Reply

Your email address will not be published. Required fields are marked *

Trending

Exit mobile version