ಬೆಂಗಳೂರು

ರೈತರು ಪ್ರತಿಭಟನೆಯನ್ನು ಕೈಬಿಡಲು ಮನವಿ ಮಾಡಿದ ಆಹಾರ ಸಚಿವ ಕೆ ಹೆಚ್. ಮುನಿಯಪ್ಪ.

Published

on

ವಿಧಾನ ಸೌಧ: ಭೂಸ್ವಾಧಿನರಾದ ರೈತರಿಗೆ ಬದಲಿಯಾಗಿ ಅಭಿವೃದ್ಧಿ ಹೋಂದಿದ ಸ್ಥಳದಲ್ಲಿ 10781 ಚದರಡಿಯಷ್ಟು ಜಮೀನು ಹಾಗೂ ಪರಿಹಾರ ನೀಡಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು ಗ್ರಾಮಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆಯನ್ನು ಕೈ ಬಿಡಲು ರೈತ ಸಂಘಟನೆಗಳಿಗೆ ಮನವಿ ಮಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್. ಮುನಿಯಪ್ಪ. ವಿಧಾನ ಸೌಧದಲ್ಲಿಂದು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೇಲ್ ರವರೊಂದಿಗೆ ಸಭೆಯನ್ನು ನೆಡೆಸಿ ಚರ್ಚಿಸಿದರು‌.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಡಿಬಿ ವತಿಯಿಂದ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತಿದ್ದು ನಾನು ರೈತರ ಪರವಾಗಿ ಒತ್ತಾಯ ಮಾಡಿದ್ದೇನೆ, ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರೊಂದಿಗೆ ಮಾತಾಡಿದ್ದು, ಇದನ್ನು ಮೊಟ್ಟ ಮೊದಲ ಹಂತದಲ್ಲಿ, ಈ ಹೋಬಳಿಯಲ್ಲಿ ಜಾಸ್ತಿ ಅಕ್ವೈರ್ ಆಗಿದೆ, ಅದನ್ನು ಕೈ ಬಿಡಬೇಕು ಎಂದು ಒತ್ತಾಯ ತಂದಿದ್ದೆ ಜೊತೆಗೆ ನೀರಾವರಿ ಭೂಮಿಯನ್ನು ಕೈ ಬಿಡಲು ಮನವಿ ಮಾಡಿದ್ದು ಸುಮಾರು 500 ಎಕರೆ ಯಸ್ಟು ಭೂಮಿಯನ್ನು ಕೈ ಬಿಟ್ಟಿದ್ದು ಇನ್ನು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ರೈತರ ಭೂಮಿಯನ್ನು ಸ್ವಾಧೀನ ಮಾಡುವುದಿಲ್ಲಾ ಎಂಬ ನಿರ್ಧಾರವನ್ನು ಮಾಡಲಾಗಿದೆ ಎಂದರು.

ಅಂದು ಮುಖ್ಯಮಂತ್ರಿಗಳು ಅಲ್ಲಿನ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಆಶ್ವಾಸನೆ ನೀಡಿದ ಹಿನ್ನಲೆಯಲ್ಲಿ ನಾವು ಮಾತು ಕೊಟ್ಟಿದ್ದಕ್ಕೆ ಚನ್ನರಾಯಪಟ್ಟಣ ಹೋಬಳಿಯಲ್ಲಿ ಮೂರು ಊರುಗಳ ಸುಮಾರು 500 ಎಕರೆ ಜಮೀನನ್ನು ಕೈಬಿಟ್ಟಿದ್ದು
ಇದು ನಮ್ಮ ಸರ್ಕಾರ ರೈತರ ಪರವಾಗಿ ತೆಗೆದುಕೊಂಡು ನಿರ್ದಾರ ಎಂದರು. ಒಂದು ವೇಳೆ ರೈತರ ಜಮೀನು ಸ್ವಾಧೀನವಾಗಿದ್ದಲ್ಲಿ ಅವರಿಗೆ ಅಭಿವೃದ್ಧಿ ಹೊಂದಿದ ಸ್ಥಳದಲ್ಲಿ ಅವರಿಗೆ 10781 ಚದರಡಿಯ ಜಮೀನನ್ನು ನೀಡಲು ನಿರ್ದಾರ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅವರಿಗೆ ನ್ಯಾಯ ಒದಗಿಸಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಬಸವರಾಜು, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಅನುರಾಧ, ಜಿಲ್ಲಾ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಸಿಇಒ ಮಹೇಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version