ಬೆಂಗಳೂರು ಗ್ರಾಮಾಂತರ

ಸರ್ಕಾರಿ ಜಮೀನು ವಶಕ್ಕೆ ಪಡೆಯುವಂತೆ, ಡಿಸಿ ಆದೇಶ.

Published

on

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಸರ್ವೇ ನಂಬರ್ 150ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಆಹಾರ ಧಾನ್ಯ ಉತ್ಪಾದನೆ ಸಲುವಾಗಿ ರೈತರಿಗೆ ಜಿಎಂಎಫ್ ಯೋಜನೆಯಡಿ ಹಂಗಾಮಿಯಾಗಿ ಸಾಗು ವಳಿ ಚೀಟಿ ನೀಡಲಾಗಿದ್ದ ಸುಮಾರು 38 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಆದೇಶ ಮಾಡಿದ್ದಾರೆ.

ಜಿಎಂಎಫ್ ಯೋಜನೆಯಲ್ಲಿ ರೈತರಿಗೆ ಸರ್ಕಾರ ದಿಂದ ಮಂಜೂರಾಗಿರುವ ಜಮೀನು ಗಳು ಕಾನೂನಾತ್ಮಕವಾಗಿ ವಹಿ ವಾಟು ಆಗದೇ ಇರುವುದರಿಂದ ಈ ಜಮೀನು ಗಳನ್ನು ಸರ್ಕಾರದ ವಶಕ್ಕೆ ತೆಗೆದು ಕೊಳ್ಳುವುದು ಅವಶ್ಯಕವಾಗಿದೆ. ಹಾಗಾಗಿ ಈ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ದೊಡ್ಡಬಳ್ಳಾಪುರ ತಹಶೀಲ್ದಾರ್ ಅವರಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಈ ಹುಲಿಕುಂಟೆ ಸಮೀಪ ಸರ್ಕಾರ ವಶಕ್ಕೆ ಪಡೆಯುತ್ತಿರುವ ಈ ಜಮೀನಿನ ಸುತ್ತಲು ಈಗಾಗಲೇ ಕೆಎಐಡಿಬಿ ಕ್ವಿನ್ ಸಿಟಿ ಹಾಗೂ ಹೈಟೆಕ್‌ ಲಾಜಿಸ್ಟಿಕ್ ಪಾರ್ಕ್‌ ಸ್ಥಾಪನೆಗಾಗಿ ಸುಮಾರು 2 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಂಡಿದೆ. ಹುಲಿಕುಂಟೆ ಗ್ರಾಮದ ಸರ್ವೇ ನಂಬರ್ 150ಕ್ಕೆ ಸಂಬಂಧಿಸಿದಂತೆ ನಡೆದಿರಬಹುದಾದ ಅಕ್ರಮ ವಹಿವಾಟಿನ ಕುರಿತು ತನಿಖೆ ನಡೆಸಿ 15 ದಿನಗಳ ಒಳಗೆ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರು ಜನರ ಸಮಿತಿ ರಚಿಸಿ ಜೂನ್ 13 ರಂದು ಕಂದಾಯ ಇಲಾಖೆ ಯ(ವಿಶೇಷ ಕೋಶ) ಅಧೀನ ಕಾರ್ಯದರ್ಶಿ ಕೆ.ಎಸ್.ಶೈಲಶ್ರೀ ಅವರು ಸಹ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version