ಬೆಂಗಳೂರು ಗ್ರಾಮಾಂತರ

ಜಯಂತೋತ್ಸವದ ಪೂರ್ವಬಾವಿ ಸಭೆ.

Published

on

ದೊಡ್ಡಬಳ್ಳಾಪುರ: ನಗರದ ಒಕ್ಕಲಿಗರ ಭವನ ದಲ್ಲಿ ಕೆಂಪೇಗೌಡ ಜಯಂತೋತ್ಸ ಆಚರಣಾ ಸಮಿತಿಯ ವತಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಬಾವಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಟಿ.ವಿ.ಲಕ್ಷ್ಮಿ ನಾರಾರಣ್ ಮಾತನಾಡುತ್ತಾ ಶುಕ್ರವಾರ ರಾಜ್ಯಾದ್ಯಂತ ನಡೆಯಲಿರುವ ಕೆಂಪೇಗೌಡರ ಜಯಂತೋತ್ಸವದ ಅಂಗವಾಗಿ ಮೊದಲಿಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಚೇರಿ ಯಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ನಂತರ. ಕೆಂಪೇಗೌಡ ಜಯಂತೋತ್ಸ ಆಚರಣಾ ಸಮಿತಿಯ ವತಿಂದ ವಿವಿಧ ಕಲಾ ತಂಡಗಳಿಂದ ವಿಜೃಂಭಣೆ ಯಿಂದ ಮೆರವಣಿಗೆ ನೆಲದ ಆಂಜನೇಯ ದೇವಾಲಯ ಆವರಣ ದಿಂದ ಬೆಳ್ಳಿರಥದಲ್ಲಿ ಕೆಂಪೇಗೌಡರ ಪತಿಮೆ ಮೆರವಣಿಗೆ ಹೊರಟು ಸಿದ್ದಲಿಂಗಯ್ಯ ವತ್ತ, ವಿವೇಕಾನಂದ ವೃತ್ತ ತಾಲ್ಲೂಕು ಕಚೇರಿ ವೃತ್ತ ,ಅಂಬೇಡ್ಕರ್ ರಸ್ತೆ ಮೂಲಕ ರಾಮೇ ಗೌಡರ ವೃತ್ತ ತಲುಪಿ ರಾಮೇಗೌಡರ ಪುತ್ತಲಿ ಗೆ ಮಾಲಾರ್ಪಣೆ ಮಾಡಿ ನಂತರ ಒಕ್ಕಲಿಗರ ಭವನದಲ್ಲಿ ಜಯಂತೋತ್ಸವ ಕಾರ್ಯಕ್ರಮ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ತಾಲ್ಲೂಕಿನ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಒಕ್ಕಲಿಗ ಗಣ್ಯಮಾನ್ಯರು ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ಭಾಗವಾಗಿ ಪ್ರತಿವರ್ಷದಂತೆ ತಾಲ್ಲೂಕಿನ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ತಾಲ್ಲೂಕಿನ ಹಿರಿಯ ರಾಜಕಾರಣಿಗಳು ತಿ.ರಂಗರಾಜು ಮಾತನಾಡುತ್ತಾ ಜಿಲ್ಲೆ ಯಾದ್ಯಂತ ಹಳ್ಳಿಗಳಿಂದ ಶೇಖರಿಸಲಾದ ಮಣ್ಣನ್ನು ಕೊಂಡೊಯ್ದು ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಕೆಂಪೇ ಗೌಡರ ಪ್ರತಿಮೆಯಿಂದ ಕೆಂಪೇಗೌಡರ ಹೆಸರು ಮತ್ತು ಇತಿಹಾಸ ವಿಶ್ವ ವಿಖ್ಯಾತ ವಾಗಿದೆ.ಅದರಂತೆ ದೊಡ್ಡಬಳ್ಳಾಪುರ ದಲ್ಲಿ ಕೆಂಪೇಗೌಡರ ವಿಗ್ರಹ ಸ್ಥಾಪನೆಗೆ ಈಗಾಗಲೇ ಸ್ಥಳಾವಕಾಶವನ್ನು(ನಿವೇಶನ) ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿಮಾಡಲಾಗಿದೆ
ನಗರದಲ್ಲಿಯೂ ಕೆಂಪೇಗೌಡರ ವಿಗ್ರಹ ಸ್ಥಾಪನೆಗೆ ಒಕ್ಕಲಿಗ ಸಮುದಾಯದೊಂದಿಗೆ ಸಮಾಜದ ಎಲ್ಲ ಸಮುದಾಯಗಳ ಸಹಕಾರವೂ ಅಗತ್ಯವಿದೆ ಕಾರಣ ನಾಡದೊರೆ ಕೆಂಪೇಗೌಡರು ಜಾತ್ಯಾತೀತ ಅರಸರಾಗಿದ್ದರು ಎಂದು ಬಿಡಿಸಿಹೇಳುವ ಅವಶ್ಯಕತೆ ಇಲ್ಲ ರಾಜ್ಯದ ಪ್ರತಿಯೊಬ್ಬ ನಾಕರೀಕನಿಗೂ ಗೊತ್ತಿರುವಿಚಾರ ವಾದ್ದರಿಂದ ಅವರನ್ನು ಪೂಜಿಸಿ,ಗೌರವಿಸುವ ಜವಾಬ್ದಾರಿ ಇಡೀ ಕರುನಾಡಿನ ಜನತೆಯದ್ದು ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲ ಸಮುದಾಯದವರು ಭಾಗವಹಿಸಿ ನಾಡದೊರೆ ಶ್ರೀ ಕೆಂಪೇಗೌಡರಿಗೆ ಗೌರವ ಸಲ್ಲಿಸಲು ಬಂದು ಭಾಗವಹಿಸಿ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಕುರುವಿಗೆರೆ ನರಸಿಂಹಯ್ಯ, ದೊಡ್ಡಬಳ್ಳಾಪುರ ಪ್ರಾಧಿಕಾರದ ಸದಸ್ಯ ಆನಂದ ಮೂರ್ತಿ,ನಗರಸಭಾ ಮಾಜಿ ಅಧ್ಯಕ್ಷೆ ಶಾಂತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version