ಬೆಂಗಳೂರು ಗ್ರಾಮಾಂತರ
ಜೂನ್ 29 ರಂದು ಕೆ ಎಂ ಹೆಚ್ ರವರ ಜೀವನಗಾಥೆ ಕೃತಿ ಲೋಕಾರ್ಪಣೆ.
ದೊಡ್ಡಬಳ್ಳಾಪುರ: ನಗರದ ಕೆ ಎಂ ಹೆಚ್ ಭವನದಲ್ಲಿ ಕೆ ಎಂ ಹೆಚ್ ಅಭಿಮಾನಿಗಳ ಸೇವಾ ಸಮಿತಿಯಿಂದ ‘ವನಸುಮದೊಳೆನ್ನ ಮನ ಕುಣಿಯನಲಿದಾಡುತಿರೆ, ಎಂಬ ಕೃತಿಯನ್ನು ಗಣ್ಯರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ನಿರ್ದೇಶಕ ಹುಲಿಕಲ್ ನಟರಾಜ್ ಹೇಳಿದರು. ಅವರು ನಗರದ ಕೆ ಎಂ ಹೆಚ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೆ ಎಂ ಹೆಚ್ ಅಭಿಮಾನಿಗಳ ಸೇವಾ ಸಮಿತಿಯಿಂದ ಕೆ ಎಂ ಹುನುಮಂತರಾಯಪ್ಪ ನವರು ಬೆಳೆದ ಬಂದ ದಾರಿ ಅವರ ಸಾದನೆಗಳ ಬಗ್ಗೆ ಸಂಪೂರ್ಣ ವಿಚಾರಗಳನ್ನು ಈ ಪುಸ್ತಕದ ಮೂಲಕ ಹೊರ ತರಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮಿ, ತಪಸೀಹಳ್ಳಿ ಸೇವಾಶ್ರಮದ ದಿವ್ಯಾಜ್ಷಾನಾನಂದ ಗಿರಿ ಸ್ವಾಮಿ ವಹಿಸಲಿದ್ದು,
ಕೃತಿ ಲೋಕಾರ್ಪಣೆಯನ್ನು ವಿದ್ಯಾವಾಚಸ್ಪತಿ ವಿಶ್ವವಿಜೇತ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಮಾಜಿ ಶಾಸಕ ಗಂಟಿಗಾನಹಳ್ಖಿ ವಿ ಕೃಷ್ಣಪ್ಪ ವಹಿಸಲಿದ್ದು, ಶಾಸಕರಾದ ಧೀರಜ್ ಮುನಿರಾಜ್, ಎಸ್ ಆರ್ ವಿಶ್ವನಾಥ್, ಆರ್ ಎಸ್ ಎಸ್ ಮುಖಂಡ ಡಿ ವಿ ನಾರಾಯಣಶರ್ಮ, ಸೇರಿದಂತೆ ಅನೇಕ ಗಣ್ಯರು ಸಾಹಿತಿಗಳು, ಹೋರಾಟಗಾರರು, ಮುಖಂಡರು ಬಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತ ನಾಗರೀಕರು ಭಾಗವಹಿಸಬೇಕು ಎಂದರು.
ನಂತರ ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ ಎಂ ಹನುಮಂತರಾಯಪ್ಪ ಮಾತನಾಡಿ ಕಳೆದ 30 ವರ್ಷಗಳ ಹಿಂದೆ ದೊಡ್ಡಬಳ್ಳಾಪುರಕ್ಕೆ ಸಾಮಾನ್ಯ ಮಗ್ಗ ಕೂಲಿ ಕೆಲಸಕ್ಕೆ ಬಂದ ನಾನು ಇಂದು ಎಲ್ಲ ರಂಗದಲ್ಲೂ ಎಲ್ಲಾ ಹುದ್ದೆಗಳನ್ನು ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಸಂಪೂರ್ಣ ಬದುಕನ್ನು ಸಂಘಟನೆ ಕಟ್ಟುವುದರಲ್ಲಿ ನಿರತನಾಗಿದ್ದು ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದು ತಮ್ಮೆಲ್ಲರ ಆಶೀರ್ವಾದ ಹಾಗೂ ನನ್ನ ನಿರಂತರ ಶ್ರಮ. ಪ್ರತಿಯೊಬ್ಬರೂ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ಕೆಲಸ ಮಾಡಿದರೆ ಸಾಕಷ್ಟು ಸಂಪಾದನೆಯ ಮಾಡಬಹುದು.
ಒಂದೇ ಗುರಿಯಿಂದ ಕೆಲಸ ಮಾಡಿದ್ದೇನೆ. ಕಷ್ಟದ ಸಮಯದಲ್ಲಿ ಸಹ ಸಂಘಟನೆಯ ಕಾರ್ಯ ಬಿಡಲಿಲ್ಲ.
ಜೀವಂತ ಅವದಿಯ ಸಂಬಳ ಗೌರವ ದನವನ್ನು ಸಂಪೂರ್ಣ ಹಣವನ್ನು ಬೇರೆಯವರಿಗೆ ನೀಡಿದ್ದೇನೆ.
ನಗರದಲ್ಲಿ.ಕೊಂಗಾಡಿಯಪ್ಪ, ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ ಯವರ ಪ್ರತಿಮೆ ಮಾಡಿಸಿದೆ. ಹೀಗೆ ಅನೇಕ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಕಾರ್ಯ ಮಾಡಿದ್ದೇನೆ. ನನ್ನನ್ನು ಗುರುತಿಸಿ ಹಿರಿಯರೆಲ್ಲರೂ ಇದೇ ತಿಂಗಳ 29 ರಂದು ಒಂದು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ ಅದಕ್ಕೆ ಎಲ್ಲ ನನ್ನ ಅಭಿಮಾನಿಗಳು ಹಿರಿಯರು ಕಿರಿಯರು ಭಾಗವಹಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್ ಎಸ್ ಎಸ್ ಮುಖಂಡ ಡಿ ವಿ ನಾರಾಯಣ ಶರ್ಮ, ಲಯನ್ ಕ್ಲಬ್ ಅದ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಮಂಜುನಾಥ, ಇದ್ದರು.