ಬೆಂಗಳೂರು ಗ್ರಾಮಾಂತರ
ಇಂದು ಬೃಹತ್ ದೃಷ್ಟಿ ತಪಾಸಣೆ ಶಿಬಿರ.
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ವತಿಯಿಂದ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಎಫ್ ಸಹಯೋಗದಲ್ಲಿ ದೃಷ್ಟಿ ತಪಾಸಣಾ ಬೃಹತ್ ಶಿಬಿರ ಜು.1ರ ಮಂಗಳವಾರ ದೊಡ್ಡಬಳ್ಳಾಪುರ ನಗರ ಹಾಗೂ ತಾಲೂಕಿನ ವಿವಿಧ ಶಾಲೆಗಳಲ್ಲಿ ನಡೆಯಲಿದೆ.
22 ಶಾಲೆಗಳಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ 50ಕ್ಕೂ ಹೆಚ್ಚು ವೈದ್ಯರ ತಂಡದಿಂದ ಒಂದೇ ದಿನ ದೃಷ್ಟಿ ತಪಾಸಣೆ ನಡೆಸುವ ಗುರಿ ಹೊಂದಲಾಗಿದೆ. ಜಿಲ್ಲಾ ಗೌರ್ನರ್ ಆಕಾಶ್ ಎ.ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕ್ಲಬ್ ಅಧ್ಯಕ್ಷ ಪ್ರೊ.ರವಿಕಿರಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಟಿಪಲ್ ಜಿಎಂಟಿ ಸಂಯೋಜಕ ಬಿ.ಎಸ್.ರಾಜಶೇಖರಯ್ಯ, ನಿಕಟಪೂರ್ವ ಜಿಲ್ಲಾ ಗೌರ್ನರ್ ಸಿ.ಎಂ.ನಾರಾಯಣಸ್ವಾಮಿ, ಪಿಡಿಜಿ ಬಿ.ಮೋಹನ್, ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಜಿಎಸ್‌ಟಿ ಸಂಯೋಜಕ ರವಿಚಂದ್ರನ್, ದೃಷ್ಟಿ ಸಂಯೋಜಕ ಅಜಿತ್‌ಬಾಬು, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್ ಪಾಲ್ಗೊಳ್ಳುವರು ಎಂದು ಕಾರ್ಯದರ್ಶಿ ಸುಮಾ ಪ್ರಸನ್ನ ತಿಳಿಸಿದ್ದಾರೆ.