ಬೆಂಗಳೂರು ಗ್ರಾಮಾಂತರ

ರೈತರ ಬಂಧನ ಖಂಡಿಸಿ ಪ್ರತಿಭಟನೆ :

Published

on

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ದೇವನ ಹಳ್ಳಿ ರೈತ ಹೋರಾಟಗಾರರನ್ನು ದೌರ್ಜನ್ಯ ದಿಂದ ಬಂಧನ ಮಾಡಿರುವುದನ್ನು ವಿರೋಧಿಸಿ ಗುರುವಾರ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಸಿಐಟಿಯು, ಸಿಪಿಐ(ಎಂ),ಕೆ ಆರ್ ಎಸ್ ಪಕ್ಷ, ದಲಿತ ಹಾಗೂ ಪ್ರಗತಿಪರ ಚಿಂತಕರು , ಕನ್ನಡಪರ ಹೋರಾಟಗಾರರು ಪ್ರತಿಭಟನೆ ನೆಡೆಸಿದರು.


ರೈತರು ತಮ್ಮ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಭಟನೆಗೆ ಮುಂದಾದರೆ ರಾಜ್ಯ ಸರ್ಕಾರ ತನ್ನ ಪೊಲೀಸ್ ಬಲವನ್ನು ಬಳಸುವ ಮೂಲಕ ರೈತರನ್ನು ಬಂಧನಕ್ಕೆ ಒಳಪಡಿಸಿದೆ ಇದು ಖಂಡನೀಯ ಎಂದು ಹೋರಾಟ ಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯ ಸರ್ಕಾರದ ಕೆ ಐ ಎ ಡಿ ಬಿ ಎಂಬ ಮಧ್ಯವರ್ತಿ ಸಂಸ್ಥೆಯು ಅಭಿವೃದ್ಧಿ ನೆಪದಲ್ಲಿ ರೈತರ ಫಲವತ್ತಾದ ಭೂಮಿಗಳನ್ನು ಕಸಿದು ಕೊಳ್ಳುತ್ತಿದೆ . ರಾಜ್ಯದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಲು ರೈತರ ಫಲವತ್ತಾದ ಭೂಮಿಯ ಬೇಕೆ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಎಷ್ಟೋ ಬರಡು ಭೂಮಿ ಇದೆ ಆ ಭೂಮಿಯನ್ನು ಬಳಕೆ ಮಾಡುವ ಮುಖಾಂತರ ರಾಜ್ಯ ಸರ್ಕಾರವು ಆ ಭಾಗದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ ಆದರೆ ಇವರಿಗೆ ಬೆಂಗಳೂರು ಸುತ್ತಮುತ್ತ ಇರುವ ಫಲವತ್ತಾದ ಕೃಷಿ ಭೂಮಿಯೇ ಬೇಕು ಕಾರಣ ರಿಯಲ್ ಎಸ್ಟೇಟ್ ಮಾಫಿಯಾ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಹೇಳುವಂತೆ ನಿಜವಾಗಿಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪರ ಇರುವುದೇ ಆದರೆ ಅಸಂವಿಧಾನಿಕವಾಗಿ ರೈತರ ಮೇಲೆ ಹಾಕಿರುವ ಕೇಸುಗಳನ್ನು ಈ ಕೂಡಲೇ ವಾಪಸ್ ಪಡೆಯಬೇಕು, ಕೆ ಐ ಎ ಡಿ ಬಿ ವಶಕ್ಕೆ ಪಡೆಯಲು ಮುಂದಾಗಿರುವ ಫಲವತ್ತಾದ ರೈತರ ಭೂಮಿಯನ್ನು ಉಳಿಸಲಿ ಎಂದರು.


ಪ್ರತಿಭಟನೆಯಲ್ಲಿ ಪ್ರಾಂತ ರೈತಸಂಘದ ಆರ್‌.ಚಂದ್ರತೇಜಸ್ವಿ, ರಾಜ್ಯ ರೈತಸಂಘದ ಮುತ್ತೇಗೌಡ, ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್, ಕರವೇ ಕನ್ನಡಿಗರ ಬಣದ ಚಂದ್ರಶೇಖರ್, ಕರವೇ ಶಿವರಾಮೇಗೌಡರ ಬಣದ ಹಮಾಮ್ ವೆಂಕಟೇಶ್, ಕೆಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ಶಿವಶಂಕರ್, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಮುಖಂಡ ಗೂಳ್ಯ ಹನುಮಣ್ಣ, ಸಿಐಟಿಯು ಮುಖಂಡ ಪಿಎ.ವೆಂಕಟೇಶ್, ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ ಮುಖಂಡರಾದ ಚೌಡಪ್ಪ, ರಘುಕುಮಾರ್, ಚಾಂದ್ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Trending

Exit mobile version