ಬೆಂಗಳೂರು ಗ್ರಾಮಾಂತರ
ಮಿಂಚಿನ ಕಾರ್ಯಾಚರಣೆ. ದರೋಡೆಕೋರರ ಬಂಧನ.
ದೊಡ್ಡಬಳ್ಳಾಪುರ: ನಂದಿ ಬೆಟ್ಟಕ್ಕೆ ಬಂದಿದ್ದ ಜೋಡಿಯನ್ನು ಅಡಗಟ್ಟಿ,ಹಣ, ಒಡವೆ ದೋಚಿದ್ದ ಮೂರುಜನ ಕಳ್ಳರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದ ತ್ಯಾಗರಾಜ ನಗರ ನಿವಾಸಿ ದುರ್ಗಾ ಪ್ರಸಾದ್(22), ರೋಜಿ ಪುರದ ಪ್ರೇಮ್ ಕುಮಾರ್ (24) ಹಾಗೂ ಅಣಗಲಪುರ ಗ್ರಾಮದ ಅರುಣ್(26) ಬಂಧಿತರು. ನಂದಿ ಬೆಟ್ಟಕ್ಕೆ ಬಂದಿದ್ದ ಬೆಂಗಳೂರು ಮೂಲದ ಜೋಡಿಯನ್ನು ಕಣಿವೆಪುರ ಗ್ರಾಮದ ಬಳಿ ಅಡ್ಡಗಟ್ಟಿದ ತಂಡ ಚಿನ್ನದ ಸರ ದೋಚಿದ ನಂತರ ಫೋನ್ ಪೇ ಮೂಲಕ ಇಪ್ಪತೈದು ಸಾವಿರ ಹಣ ವರ್ಗಾಯಿಸಿಕೊಂ ಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾದ 24 ತಾಸಿನ ಒಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.