ಬೆಂಗಳೂರು ಗ್ರಾಮಾಂತರ
ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಎಸ್‌ಯು ರಮೇಶ್ ನೇಮಕ
ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಎಸ್‌ಯು ರಮೇಶ್ ನೇಮಕ ಮಾಡಲಾಗಿದೆ ಎಂದು ಹಿರಿಯ ಮುಖಂಡ ಮರಿಯಪ್ಪ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಹಾಸಭಾ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರಾದ ಸಿದ್ದಯ್ಯ ಅವರು ಕಸಬಾ ಹೋಬಳಿ ಸೊಣಪನಹಳ್ಳಿಯ ರಮೇಶ್ ಅವರನ್ನು ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದು, ತಾಲ್ಲೂಕು ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಂಡು ಸಮುದಾಯದ ಪರವಾಗಿ ಕೆಲಸ ಮಾಡಲು ಆದೇಶಿಸಿದ್ದಾರೆ, ರಮೇಶ್ ಅವರಿಗೆ ತಾಲ್ಲೂಕಿನ ಹಿರಿಯರ ಮತ್ತು ಯುವಜನರ ಬೆಂಬಲವಿದೆ. ಒಟ್ಟಾರೆ ಸಮುದಾಯದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ ಎಂಬ ಭರವಸೆ ನಮಗಿದೆ ಎಂದರು.
ತಾಲೂಕಿನಲ್ಲಿ ಸಮುದಾಯಕ್ಕೆ ಬಲ ತುಂಬಲು ಸಿದ್ದಯ್ಯ ಅವರು ಪತ್ರ ಕೊಟ್ಟಿದ್ದಾರೆ. ತಾಲ್ಲೂಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುದು ನಮ್ಮ ಅಭಿಪ್ರಾಯ ಅದನ್ನು ರಮೇಶ್ ಅವರು ಸಮರ್ಥವಾಗಿ ನಿರ್ವಹಿಸ್ತಾರೆ ಎಂಬ ಆಶಯ ನಮ್ಮದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗೂಳ್ಯ ಹನುಮಣ್ಣ ಅವರು, ಕಳೆದ ಐದು ವರ್ಷಗಳಿಂದ ತಾಲ್ಲೂಕಿನಲ್ಲಿ ನಾವು ಮಾಡಿದ ಸಮುದಾಯಪರ ಕೆಲಸ ಮತ್ತು ಹೋರಾಟಗಳನ್ನು ಗುರುತಿಸಿದ ಮಹಾಸಭಾ ಅಧ್ಯಕ್ಷ ಸಿದ್ದಯ್ಯ ರಮೇಶ್ ಅವರನ್ನು ಕರೆದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷರಾಗಿ ಕೆಲಸ ಮಾಡುವಂತೆ ತಿಳಿಸಿದ್ದಾರೆ, ರಮೇಶ್ ಅವರೊಟ್ಟಿಗೆ ಸಮುದಾಯವಿದೆ, ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದರು.
ಮತ್ತೊಬ್ಬ ಮುಖಂಡ ಕಚೇರಿಪಾಳ್ಯ ಮುನಿರಾಜು ಅವರು ಮಾತನಾಡಿ, ನೂತನ ಅಧ್ಯಕ್ಷರಿಗೆ ಒಳ್ಳೆಯದಾಗಲಿ. ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದ ಕೆಲಸಗಳಲ್ಲಿ ತೊಡಕು ಉಂಟಾಗಿತ್ತು, ಸರ್ಕಾರದಿಂದ ನಮ್ಮ ಸಮುದಾಯದಕ್ಕೆ ಸಿಗಬೇಕಾದ ಸೌಲಭ್ಯಗಳನ್ನ ತಲುಪಿಸುವಲ್ಲಿ ರಮೇಶ್ ಅವರು ಕೆಲಸ ಮಾಡಲಿ ಎಂದು ಶುಭ ಹಾರೈಸಿದರು. ಅಜಯ್ ಅವರು ಮಾತನಾಡಿ ರಮೇಶ್ ಅವರು ಕೆಲಸ ಮಾಡುತ್ತಾರೆ ಎಂಬ ಭರವಸೆ ನಮಗಿದೆ. ತಾಲೂಕಿನಲ್ಲಿ ನಮ್ಮ ಸಮುದಾಯದ ಎಲ್ಲಾ ಯುವಕರು ಇವರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಮಹಾಸಭಾದ ನೂತನ ರಮೇಶ್ ಅವರು ಮಾತನಾಡಿ, ನಾನು ಆರಂಭದಿಂದಲೂ ಸಮುದಾಯಕ್ಕಾಗಿ ಶ್ರಮಿಸ್ತಿದ್ದೇನೆ, ತಾಲ್ಲೂಕಿನ ಮುಖಂಡರು ಹಾಗೂ ಯುವ ಜನರ ಸಹಕಾರ ಪಡೆದು ಇನ್ನು ಹೆಚ್ಚಿನ ಕೆಲಸ ಮಾಡುತ್ತೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ತಳಗವಾರ ಪುನೀತ್, ಛಲವಾದಿ ಸುರೇಶ್ ಹಮಾಮ್ ಸತೀಶ್, ಮುನಿರಾಜು ಆನಂದ ತಿಮ್ಮರಾಜು ಅಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು