ದೇಶ - ವಿದೇಶ
ಇರಾನ್ ಮೇಲೆ ಬಾಂಬ್ ದಾಳಿ ನಡೆಸಿರುವ ಮೂಲಕ ಯುದ್ಧದಲ್ಲಿ ಅಮೆರಿಕಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ.
ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು, ಇದೀಗ ಅಮೆರಿಕಾ ಈ ಸಂಘರ್ಷಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಅಮೆರಿಕದ ವಾಯುಪಡೆಗಳು ಇರಾನ್‌ನ 3 ಪ್ರಮುಖ ನ್ಯೂಕ್ಲಿಯರ್ ಸ್ಥಾವರಗಳ ಮೇಲೆ ದಾಳಿ ನಡೆಸಿದ್ದು, ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿ ಇರುವ ಪರಮಾಣು ತಾಣಗಳು ಗುರಿಯಾಗಿವೆ ಎಂಬ ಮಾಹಿತಿ ಲಭಿಸಿದೆ.
ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದು, ಈ ದಾಳಿ ಅಣುಯುದ್ಧದ ಆತಂಕವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಅಮೆರಿಕ ನಡೆಸಿದ ವಾಯುದಾಳಿಗಳು ಸಂಪೂರ್ಣ ಯಶಸ್ವಿಯಾಗಿ ನಡೆದಿದ್ದು, ಎಲ್ಲಾ ಯುದ್ಧವಿಮಾನಗಳು ಈಗ ಇರಾನ್‌ನ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗಡೆಗಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.